ಹಾಸನ :ಯುವತಿ ಶವ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ…

1371

ಹಾಸನ : 12 ದಿನಗಳಿಂದ ಹೊಟೇಲ್ ನಲ್ಲಿ ರೂಂ ಮಾಡಿಕೊಂಡಿದ್ದವಳ ಮೃತದೇಹ ಅದೇ ಹೋಟೆಲ್ ಹಿಂಭಾಗ ಪತ್ತೆಯಾಗಿರೋ ಘಟನೆ ಹಾಸನ ನಗರದಲ್ಲಿ ನಡೆದಿದೆ. ನಗರದ ಬಿ.ಎಂ.ರಸ್ತೆಯಲ್ಲಿರೋ ಸರಾಯು ಹೋಟೇಲ್ ನಲ್ಲಿ ಅರಕಲಗೂಡು ಮೂಲದ 23 ವರ್ಷದ ಭವಿತಾ ರೂಂ ಬಾಡಿಗೆ ಪಡೆದಿದ್ಲು. ಇಂದು ಅದೇ ಹೋಟೆಲ್ ಹಿಂಭಾಗ ಅವಳ ಮೃತ ದೇಹ ಪತ್ತೆಯಾಗಿದ್ದು ಆತ್ಮಹತ್ಯೆಯೋ ಅಥವ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಮೃತ ಭವಿತಾ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಕೈ ಮೇಲೆ ಪುನೀತ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಮಗಳ ಸಾವಿನ ವಿಷಯ ತಿಳಿದ ಪೋಷಕರು ಸ್ಥಳಕ್ಕೆ ಆಗಮಿಸಿ ಸೂಕ್ತ ತನಿಖೆ ನಡೆಸುವಂತೆ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರೋ ಬಡಾವಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ….