ಚಿಕ್ಕಮಗಳೂರು : ಹೊರನಾಡು, ಶೃಂಗೇರಿ, ಕಳಸ ಮಾರ್ಗ 3 ಗಂಟೆ ಬಂದ್….!

634

ಚಿಕ್ಕಮಗಳೂರು :ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆಯಲ್ಲಿ 3 ಗಂಟೆ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ  ಬಗಾದಿ ಗೌತಮ್ ಅವರು  ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 23ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ವಿರಾಜಪೇಟೆ-ಬೈಂದೂರ್ ರಾ. ಹೆ 27ರಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಆಗಲಿದೆ. ಈ ಬಾರಿಯ ಮಹಾ ಮಳೆಗೆ ಸೇತುವೆ ಕುಸಿಯುವ ಹಂತದಲ್ಲಿರುವುದರಿಂದ ಅಧಿಕಾರಿಗಳು ಪರಿವೀಕ್ಷಣೆ ಮಾಡಲಿದ್ದಾರೆ. Bridge Testing Machine ಬಳಸಿ ಸೇತುವೆಯ ಸಾಮರ್ಥ್ಯದ ಕುರಿತು ಪರಿವೀಕ್ಷಣೆಯನ್ನ ಅಧಿಕಾರಿಗಳು ನಡೆಸಲಿದ್ದಾರೆ.
ಈ ವೇಳೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಮಲೆ ನಾಡಿನಲ್ಲಿ ಮಹಾಮಳೆಗೆ ಒಂದೊಂದೇ ಸೇತುವೆಗಳು ಕುಸಿಯುತ್ತಿದ್ದು, ಇದೀಗ ರಾಷ್ಟ್ರೀಯ ಹೆದ್ದಾರಿಯ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಸೇತುವೆ ಕೂಡ ಬಿರುಕು ಬಿಟ್ಟಿರೋದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.