ಚಿಕ್ಕಮಗಳೂರು : ಬಾಬಾಬುಡಾನ್ ಗಿರಿಯಲ್ಲಿ ಹೃದಯಾಘಾತದಿಂದ ಕರ್ತವ್ಯ ನಿರತ ಎಎಸೈ ಸಾವು…

516
firstsuddi

ಚಿಕ್ಕಮಗಳೂರು: ಬಾಬಾಬುಡಾನ್ ಗಿರಿ (ದತ್ತಪೀಠ) ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಎ ಎಸೈ ಓರ್ವರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ . ಮೃತರನ್ನು ಮಲ್ಲಂದೂರು ಠಾಣೆಯ ಎಎಸೈ ಜಗದೀಶ್ (58) ಎಂದು ಗುರುತಿಸಲಾಗಿದೆ. ಅತಿಯಾದ ಚಳಿ ಹಾಗೂ ಅತಿ ಮಂಜಿನ ನಡುವೆಯೂ ಕಳೆದ ಒಂದು ವಾರದಿಂದ ಸತವಾಗಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ್ ಅವರು ಭಾನುವಾರ ಹೃದಯಾಘಾತದಿಂದ ಮೃತರಾಗಿದ್ದಾರೆ.