ಚಿಕ್ಕಮಗಳೂರು : ನವೆಂಬರ್ 20. ನಗರದ ರತ್ನಗಿರಿ ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ ಮೂಳೆ ಮತ್ತು ಕೀಲು ನೋವುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನ.23 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ತಜ್ಞ ವೈದ್ಯರ ತಂಡ ಪಾಲ್ಗೊಂಡು ಮೂಳೆ ಮತ್ತು ಕೀಲು ನೋವುಗಳ ಜೊತೆಗೆ ಅಸ್ಥಿ ಸಾಂದ್ರತೆ ತಪಾಸಣೆ ನಡೆಸಲಿದೆ.
ಸೊಂಟ, ಬೆನ್ನು, ಕುತ್ತಿಗೆ, ಮಂಡಿನೋವು, ನರದೌರ್ಬಲ್ಯ, ಮೈಗ್ರೇನ್ ಮುಂತಾದ ಧೀರ್ಘ ಕಾಲದ ಖಾಯಿಲೆಯಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ತಪಾಸಣೆಗೆ ಒಳಗಾಗಬಹುದು, ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ರಿಯಾಯತಿ ದರದಲ್ಲಿ ಮಾಡಲಾಗುವುದು ಎಂದು ಆಸ್ಪತ್ರೆಯ ವೈಧ್ಯಾಧಿಕಾರಿ ಡಾ|| ಚಂದ್ರಶೇಖರ್ ತಿಳಿಸಿದ್ದಾರೆ.
ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ 8277133719 ಅಥವಾ 8310711853 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನ.23 ರಂದು ಸ್ಪರ್ಶ ಆಸ್ಪತ್ರೆಯಲ್ಲಿ ಮೂಳೆ ಮತ್ತು ಕೀಲು ನೋವುಗಳ ಉಚಿತ ತಪಾಸಣೆ...










