ಬಣಕಲ್: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಣಕಲ್ ರಿವರ್ ವ್ಯೂವ್ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ರಾದಾಕಾರ್ಯಪ್ಪ ತಿಳಿಸಿದ್ದಾರೆ.
ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಾದ ಶ್ರೀವರ ಹಾಗೂ ಸುಫಿಯಾನ್ ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಇನ್ನೋರ್ವ ವಿದ್ಯಾರ್ಥಿ ತರುಣ್ ತೃತೀಯ ಸ್ಥಾನ ಪಡೆದಿದ್ದಾರೆ.ಇವರೆಲ್ಲರೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರಿಗೆ ನಂದೀಶ್ ಹಾಗೂ ಕೃಪಾನಂದೀಶ್ ತರಬೇತಿ ನೀಡಿದ್ದಾರೆ.ಇವರ ಸಾಧನೆಗೆ ಪೋಷಕರು ಶಾಲಾ ಶಿಕ್ಷಕವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ:ಕರಾಟೆ ಸ್ಪರ್ಧೆಯಲ್ಲಿ ಬಣಕಲ್ ರಿವರ್ ವ್ಯೂವ್ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ.










