ಮೂಡಿಗೆರೆ :ಟಾಟಾ ಏಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಪಟ್ಟಣದ ನ್ಯಾಯಾಲಯ ಮುಂಭಾಗ ನಡೆದಿದ್ದು.ಮುಂಜಾನೆ ಏಳು ಗಂಟೆಗೆ ಬೇಲೂರಿನಿಂದ ಕೂಲಿ ಕಾರ್ಮಿಕರನ್ನು ತುಂಬಿಸಿಕೊಂಡು ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಟಾಟಾ ಏಸ್ ಮೂಡಿಗೆರೆಯ ನ್ಯಾಯಾಲಯ ಬಳಿ ಇರುವ ಹಂಪ್ ಹಾದುಹೋಗುವಾಗ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಟಾಟಾ ಏಸ್ ವೇಗವಾಗಿ ಬರುತ್ತಿತ್ತು. ಮುಂದೆ ಇರುವ ಹಂಪ್ ಕಾಣದ ಆಟೋ ಚಾಲಕ ಏಕಾ ಏಕಿ ಹಂಪ್ ಹಾರಿಸಿದ್ದರಿಂದ ಆಕ್ಸಲ್ ಬ್ಲೇಡ್ ಕಟ್ ಆಗುವುದರ ಜೊತೆಗೆ , ಬ್ರೇಕ್ ಕಂಟ್ರೋಲರ್ ಪೈಪ್ ಕಟ್ಟಾಗಿದೆ. ಇದರಿಂದ ಗಾಬರಿಗೊಂಡ ಚಾಲಕ ಸಮೀಪದಲ್ಲಿಯೇ ಇದ್ದ ಹೋಟೆಲ್ ಒಂದಕ್ಕೆ ಢಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿದಿದ್ದಾರೆ. ಆಟೋದಲ್ಲಿ ಮಣ್ಣಿನ ಕೆಲಸಕ್ಕೆಂದು 35 ಜನರನ್ನು ಕರೆದೊಯ್ಯಲಾಗುತ್ತಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಮೂಡಿಗೆರೆ ಪೋಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೆ.










