ಪಾರ್ಟಿ ಮುಗಿಸಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನ-ಆರೋಪಿ ಬಂಧನ…

383
firstsuddi

ಬೆಂಗಳೂರು : ಪಾರ್ಟಿ ಮುಗಿಸಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ಟೆಕ್ಕಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಗರದ ಬೆಳ್ಳಂದೂರಿನಲ್ಲಿ ನಡೆದಿದ್ದು, ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀಲಬ್ ನಯನ್(26) ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಮಹಿಳೆ ಭಾನುವಾರ ಮಧ್ಯರಾತ್ರಿ ತನ್ನ ಪತಿಯ ಹುಟ್ಟುಹಬ್ಬವನ್ನು ಆಚರಿಸಿದ್ದರು. ಮಹಿಳೆ ಸೇರಿ ಪತಿಯ ನಾಲ್ವರು ಸ್ನೇಹಿತರು ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಪಾರ್ಟಿ ಮಾಡಿದ್ದು, ಬಳಿಕ ಹುಟ್ಟುಹಬ್ಬದ ಪಾರ್ಟಿಯನ್ನು ಮತ್ತೊಬ್ಬ ಸ್ನೇಹಿತನ ಮನೆಯಲ್ಲಿ ಆಚರಿಸಲು ತೆರಳಿದ್ದರು. ಮನೆಗೆ ಬಂದ ಬಳಿಕ ಪತಿಯ ಸ್ನೇಹಿತರೆಲ್ಲರೂ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದರು. ಆದರೆ ಮಹಿಳೆ ಆಯಾಸಗೊಂಡಿದ್ದರಿಂದ ರೂಮಿನಲ್ಲಿ ಮಲಗಿದ್ದು, ಇದನ್ನು ಗಮನಿಸಿದ ಆರೋಪಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆ ಕಿರುಚಾಡಿದ್ದಾರೆ. ಮಹಿಳೆ ಕಿರುಚುವುದನ್ನು ಕೇಳಿ ಸ್ನೇಹಿತರೆಲ್ಲರೂ ಬರುವಷ್ಟರಲ್ಲಿ ಆರೋಪಿ ಶೌಚಾಲಯದತ್ತ ಓಡಿ ತಪ್ಪಿಸಿಕೊಂಡಿದ್ದು, ಈ ಕುರಿತು ಮಹಿಳೆ ಹಾಗೂ ಆಕೆಯ ಪತಿ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.