ಕೊಲ್ಕತ್ತಾ : ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಣ್ಣೀರಿಡುವಂತಾಗಿದೆ. ಇದೇ ವೇಳೆ ಕಳ್ಳರು ತರಕಾರಿ ಅಂಗಡಿಗೆ ಮುತ್ತಿಗೆ ಹಾಕಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಬಿಟ್ಟು ಈರುಳ್ಳಿಯನ್ನು ಕದ್ದೊಯ್ದಿರುವ ಆಶ್ಚರ್ಯಕರ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಸುತಹತ ಎಂಬ ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 1 ಕೆ.ಜಿ ಈರುಳ್ಳಿಯ ದರ 100 ರೂ ಗಡಿದಾಟಿದ್ದು, ಹೀಗಾಗಿ ಸೋಮವಾರ ರಾತ್ರಿ ತರಕಾರಿ ಅಂಗಡಿಗೆ ಮುತ್ತಿಗೆ ಹಾಕಿದ ಕಳ್ಳರು ಹಣದ ಪೆಟ್ಟಿಗೆಯಲ್ಲಿದ್ದ ಒಂದು ರೂಪಾಯಿಯನ್ನು ಮುಟ್ಟದೇ ಈರುಳ್ಳಿ ಚೀಲವನ್ನು ಕದ್ದೊಯ್ದಿದ್ದಾರೆ. ಈ ಕುರಿತು ಪ್ರತಿಕ್ರಯಿಸಿದ ಅಂಗಡಿಯ ಮಾಲೀಕ, ನಾನು ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಈರುಳ್ಳಿ ಕಳ್ಳತನವಾಗಿದ್ದನ್ನು ನೋಡಿ ಕೂಡಲೇ ಹಣದ ಪೆಟ್ಟಿಗೆಯನ್ನು ಗಮನಿಸಿದ್ದೇನೆ ಹಣದ ಪೆಟ್ಟಿಗೆಯಲ್ಲಿದ್ದ ಹಣ ಹಾಗೆಯೇ ಇತ್ತು. ಆದರೆ ಅಂಗಡಿಯಲ್ಲಿದ್ದ 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಕಳ್ಳತನ ಮಾಡಿದ್ದಾರೆ ಎಂದು ಪ್ರತಿಕ್ರಯಿಸಿದ್ದಾರೆ.










