ಚೆನ್ನೈ : ತಮಿಳುನಾಡಿನಾಧ್ಯಂತ ಭಾರಿ ಮಳೆಯಿಂದ ಮನೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 17ಮಂದಿ ಮೃತಪಟ್ಟಿರುವ ಘಟನೆ ಮೇಟ್ಟುಪಾಳಯಂನ ನಡೂರ್ ಗ್ರಾಮದಲ್ಲಿ ನಡೆದಿದೆ. ಗುರು(45), ರಾಮ್ನಾಥ್(20), ಆನಂದ್ ಕುಮಾರ್(40), ಹರಿಸುಧ(16), ಶಿವಕಾಮಿ(45), ಓವಿಯಮ್ಮಳ್(50), ನಾಥಿಯಾ(30), ವೈದೇಹಿ(40), ತಿಲಕವತಿ(50), ಅರುಕಾನಿ(55), ರುಕ್ಮಿಣಿ(40), ನಿವೇತ(18), ಚಿನ್ನಮ್ಮಳ್(70), ಅಕ್ಷಯ(7) ಹಾಗೂ ಲೊಗುರಂ(7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದ್ದು, ಇಂದು ಬೆಳಿಗ್ಗೆ 5:30ರ ಸುಮಾರಿಗೆ ಮೃತರೆಲ್ಲರೂ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭಾರಿ ಮಳೆಯಿಂದ ಮನೆಗಳು ಕುಸಿದಿದ್ದು, ಪರಿಣಾಮ 17ಮಂದಿ ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಅವಶೇಷಗಳಡಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆದು ಮೇಟ್ಟುಪಾಳಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೇಟ್ಟುಪಾಳಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










