ನವದೆಹಲಿ : ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ವಕೀಲರಾದ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ಕೈಬಿಡಲಾಗಿದ್ದು, ಇನ್ನು ಮುಂದೆ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಧವನ್ ಅವರು ವಾದ ಮಂಡನೆ ಮಾಡುವಂತಿಲ್ಲ. ಯಾವುದೇ ಪೂರ್ವ ಮಾಹಿತಿ ನೀಡದೇ ಅನಾರೋಗ್ಯದ ಕಾರಣ ನೀಡಿ ನನ್ನನ್ನು ವಜಾಗೊಳಿಸಿದ್ದಾರೆ. ಅಯೋಧ್ಯೆ ತೀರ್ಪು ಕುರಿತಂತೆ ಮರುಪರಿಶೀಲನಾ ಅರ್ಜಿಯ ವಾದ ಮಂಡನೆಯಲ್ಲಿ ಹಾಗೂ ಪ್ರಕರಣದಲ್ಲಿ ನಾನಿನ್ನು ಭಾಗಿಯಾಗುವುದಿಲ್ಲ ಎಂದು ವಕೀಲ ರಾಜೀವ್ ಧವನ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.










