ಚಿಕ್ಕಬಳ್ಳಾಪುರದಲ್ಲಿ ಅಬ್ಬರದಿಂದ ಸಾಗುತ್ತಿದೆ ಚಿಕನ್ ಪಾಲಿಟಿಕ್ಸ್…

261
firstsuddi

ಚಿಕ್ಕಬಳ್ಳಾಪುರ : ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಬೆಂಬಲಿಗರಿಂದ ಚಿಕನ್ ಪಾಲಿಟಿಕ್ಸ್ ಅಬ್ಬರದಿಂದ ಸಾಗುತ್ತಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳಾದ ಸಾಮಸೇನಹಳ್ಳಿ, ಚಿಕ್ಕ ಪೈಲಗುರ್ಕಿ, ದೊಡ್ಡ ಪೈಲಗುರ್ಕಿ ಗ್ರಾಮಗಳಲ್ಲಿ ಮತದಾರರಿಗೆ ಕೋಳಿ ಹಂಚಿಕೆ ಮಾಡಿ ಮತಯಾಚನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.