ಹೈದರಾಬಾದ್ : ಪಶುವೈದ್ಯೆ ದಿಶಾ ಅವರ ಮೇಲಿನ ನಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳು ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದು, ಆರೋಪಿಗಳ ಎನ್ಕೌಂಟರ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಿಶಾ ಸಹೋದರಿ, ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದು ನಮಗೆ ಸಂತಸವಾಗಿದೆ. ಪೊಲೀಸರು ಎನ್ಕೌಂಟರ್ ಮಾಡುತ್ತಾರೆ ಎಂದು ತಿಳಿದಿರಲಿಲ್ಲ. ಈ ಪ್ರಕರಣ ಕುರಿತು 2-3 ತಿಂಗಳು ವಿಚಾರಣೆ ನಡೆಸಿ ಬಳಿಕ ಆರೋಪಿಗಳನ್ನು ಗಲ್ಲಿಗೇರಿಸುತ್ತಾರೆ ಎಂದು ತಿಳಿದೆದ್ದೆವು. ಆದರೆ ನಮ್ಮ ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದಾರೆ. ಈಗಾ ನನ್ನ ಅಕ್ಕನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದಿಶಾ ಅವರ ತಂದೆ ಪ್ರತಿಕ್ರಯಿಸಿ ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದು ಸಂತಸವಾಗಿದೆ. ಇಂದಿಗೆ ನನ್ನ ಮಗಳು ನಮ್ಮನ್ನು ಅಗಲಿ 10ದಿನಗಳು ಕಳೆದವು. ನಾನು ನನ್ನ ನೋವನ್ನು ಪೊಲೀಸರ ಬಳಿ ತೋಡಿಕೊಂಡಿದ್ದೆ. ಈಗಾ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.
ದಿಶಾ ಅವರ ತಾಯಿ ಕೂಡಾ ಪ್ರತಿಕ್ರಯಿಸಿ, ಈ ಎನ್ಕೌಂಟರ್ನಿಂದ ನನಗೆ ಸಮಾಧಾನ ಆಗಿದೆ. ನನ್ನ ಮಗಳಿಗೆ ತೆಲಂಗಾಣ ಪೊಲೀಸರು ಹಾಗೂ ತೆಲಂಗಾಣ ಸರ್ಕಾರ ನ್ಯಾಯ ಕೊಡಿಸಿದ್ದಾರೆ. ನನ್ನ ಮಗಳು ಪುನಃ ಮರಳಿ ಬರುವುದಿಲ್ಲ. ಆದರೆ ಪೊಲೀಸರ ಕ್ರಮಕ್ಕೆ ಇಂದು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ನಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದಾರೆ. ತೆಲಂಗಾಣ ಪೊಲೀಸರಿಗೆ ಧನ್ಯವಾದವನ್ನು ತಿಳಿಸುತ್ತೇವೆ ಎಂದರು.










