ನನ್ನ ಗಂಡನನ್ನು ಪೊಲೀಸರು ಯಾಕೆ ಗುಂಡಿಕ್ಕಿ ಕೊಂದರು? ನನಗೆ ನನ್ನ ಗಂಡ ಬೇಕು, ಅತ್ಯಾಚಾರ ಆರೋಪಿ ಪತ್ನಿ ಪ್ರತಿಭಟನೆ…

559
firstsuddi

ತೆಲಂಗಾಣ : ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದನ್ನು ಖಂಡಿಸಿ ಆರೋಪಿ ಚೆನ್ನಕೇಶವಲು ಪತ್ನಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ಮಂಡಲದ ಗುಡಿಗಂಡ್ಲ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ದೇಶಾದ್ಯಂತ ಅತ್ಯಾಚಾರ ನಡೆಸಿರುವ ಎಷ್ಟೋ ಆರೋಪಿಗಳಿದ್ದಾರೆ ಅವರಿಗೆಲ್ಲಾ ಇಂತಹ ಶಿಕ್ಷೆಯನ್ನೇ ನೀಡಲಾಗಿದೆಯಾ? ನನ್ನ ಗಂಡನನ್ನು ಪೊಲೀಸರು ಯಾಕೆ ಗುಂಡಿಕ್ಕಿ ಕೊಂದರು? ನನಗೆ ನನ್ನ ಗಂಡ ಬೇಕು. ತಪ್ಪು ಮಾಡಿದವರು ಜೈಲಲ್ಲಿ ಎಷ್ಟೋ ಜನ ಇದ್ದಾರೆ ಅವರನ್ನೆಲ್ಲಾ ಎನ್‍ಕೌಂಟರ್ ಯಾಕೆ ಮಾಡಲಿಲ್ಲ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.