ವಯನಾಡು : “ಭಾರತ ವಿಶ್ವದ ಅತ್ಯಾಚಾರಗಳ ರಾಜಧಾನಿ” ಎಂದೆನಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿವಾಧಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕೇರಳದ ವಯನಾಡಿನಲ್ಲಿ ಮಾತನಾಡಿದ ಅವರು, ಭಾರತ ತನ್ನ ಮಣ್ಣಿನ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲು ಭಾರತಕ್ಕೆ ಯಾಕೆ ಆಗುತ್ತಿಲ್ಲ ಎಂದು ವಿದೇಶಿ ರಾಷ್ಟ್ರಗಳು ಪ್ರಶ್ನಿಸುತ್ತಿವೆ. ಉತ್ತರ ಪ್ರದೇಶದ ಶಾಸಕರೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಗಿದ್ದಾರೆ. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾಚಾರ, ದಲಿತರ ಮೇಲಿನ ದೌರ್ಜನ್ಯ, ಅವರ ಮೇಲೆ ಹಲ್ಲೆ ಮಾಡುವುದು ಇಂತಹ ಬೆಳವಣಿಗೆ ದೇಶದಲ್ಲಿ ಹೆಚ್ಚಾಗುತ್ತಿದೆ ಎಂದರು.










