ಸ್ವಲ್ಪ ಮನೆ ಕಡೆಗೂ ಗಮನ ಕೊಡು ಮಗಳೇ-ರಶ್ಮಿಕಾ ಮಂದಣ್ಣ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ ತಂದೆ…

339
firstsuddi

ಬೆಂಗಳೂರು : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹೀಗಾಗಿ ಅವರಿಗೆ ತಮ್ಮ ಕುಟುಂಸ್ಥರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮನೆಯ ಕಡೆಗೂ ಗಮನ ಕೊಡು ಮಗಳೇ ಎಂದು ರಶ್ಮಿಕಾ ಅವರ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ನಟ ಧ್ರುವಸರ್ಜಾ ನಟಿಸಿರುವ “ಪೊಗರು” ಶೂಟಿಂಗ್‍ನಲ್ಲಿದ್ದ ರಶ್ಮಿಕಾ ಅವರು, ಭಾನುವಾರ ಚೆನ್ನೈಗೆ ತೆರಳಿದ್ದಾರೆ. ಬಳಿಕ ಸೋಮವಾರ ಚೆನ್ನೈಯಿಂದ ನೇರವಾಗಿ ಹೈದರಾಬಾದ್‍ಗೆ ತೆರಳಿದ್ದಾರೆ. ಇದರಿಂದ ಬೇಸರಗೊಂಡ ರಶ್ಮಿಕಾ ಅವರ ತಂದೆ “ ನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ಪ ಮನೆ ಕಡೆಗೂ ಗಮನ ಕೊಡು ಮಗಳೇ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಯಿಸಿದ ರಶ್ಮಿಕಾ ಅವರ ತಾಯಿ, “ ನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲೇ ಇರುತ್ತೇನೆ. ಆದರೆ ಅವಳ ತಂದೆ ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವುದನ್ನು ನೋಡಿ ನಾನೇ ಆಶ್ಚರ್ಯ ಪಡುತ್ತಿದ್ದೇನೆ. ರಶ್ಮಿಕಾ ನಟಿಸಿರುವ ಎಲ್ಲಾ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಆಗುತ್ತದೆ. ಹೀಗಾಗಿ ಆ ವರ್ಷ ಅವಳಿಗೆ ಬಹಳ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಒಳ್ಳೆಯ ಪಾತ್ರಗಳು ಸಿಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.