ಪ್ರತಾಪ್ ಸಿಂಹ ಅಪ್ಪಿತಪ್ಪಿ ಸಚಿವರಾಗಿದ್ದಾರೆ : ದಿನೇಶ್ ಗುಂಡುರಾವ್ ಕಿಡಿ…

308
firstsuddi
ಉಡುಪಿ: ಶ್ವಾಸಕೋಶ ತೊಂದರೆ, ನ್ಯುಮೋನಿಯಾ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಆಸ್ಪತ್ರೆಗೆ ಭೇಟಿ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ಪೇಜಾವರ ಶ್ರೀಗಳ ದರ್ಶನ ಪಡೆದಿದ್ದು, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ. ಅವರ ಆರೋಗ್ಯದ ಬಗ್ಗೆ ನನಗೆ ಬಹಳ ಆತಂಕ ಆಗಿತ್ತು ಆದ್ದರಿಂದ ಬಂದು ನೋಡಬೇಕು ಅಂತಾ ನಿರ್ಧಾರ ಮಾಡಿದೆ. ಆಧ್ಯಾತ್ಮಿಕ,ಧಾರ್ಮಿಕ ಸೇವೆ ಮಾಡಿದ ವಿಶೇಷ ಶಕ್ತಿ ಅವರಾಗದ್ದು, ಎಲ್ಲಾ ವಿಷಯದ ಬಗೆಗೂ ತನ್ನದೇ ಅಭಿಪ್ರಾಯ ವ್ಯಕ್ತಪಡಿಸುವವರು. ಅವರ ಬಗ್ಗೆ ರಾಜ್ಯ,ರಾಷ್ಟ್ರದಲ್ಲಿ ಗೌರವವಿದೆ, ವಯಸ್ಸಾದ್ರು ಸುಮ್ಮನೇ ಕೂರುತ್ತಿರಲಿಲ್ಲ ಅವರ ಆರೋಗ್ಯ ಚೇತರಿಕೆಯಾಗಬೇಕು ಎಂದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಪ್ರತಾಪ್ ಸಿಂಹ ಅಪ್ಪಿತಪ್ಪಿ ಸಚಿವರಾಗಿದ್ದಾರೆ. ಬಿಜೆಪಿ ನಾಯಕರು ಅನವಶ್ಯಕವಾಗಿ  ಮಾತನಾಡುತ್ತಾರೆ. ಗಲಾಟೆ ಸೃಷ್ಟಿಯಾಗಬೇಕು ಎಂಬ ಉದ್ದೇಶ ಇವರದ್ದು. ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ, ಸುರೇಶ್ ಅಂಗಡಿ ಒಂದೇ ವರ್ಗದವರು. ಇವರೆಲ್ಲಾ ಬೆಂಕಿ ಹಚ್ಚುವ ಗುಂಪಿನವರು ಎಂದು ಕಿಡಿಕಾರಿದ್ದಾರೆ. ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಸಚಿವರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಎಮ್ ಎ ಗಫೂರ್ ಹಾಗೂ ಇತರರು ಉಪಸ್ಥಿತರಿದ್ದರು.