ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ-ವೈವಾಹಿಕ ಜೀವನಕ್ಕೆ ಕಾಲಿಟ್ಟ 60ರ ಅಜ್ಜ-ಅಜ್ಜಿ…!

328
firstsuddi

ಕೇರಳ : ಸರ್ಕಾರಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ವೃದ್ಧ ವೃದ್ದೆಯರಿಬ್ಬರು ಪ್ರೀತಿಯ ಬಲೆಗೆ ಬಿದ್ದು ಇದೀಗ ಇಬ್ಬರು ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿವೆ. ಕೊಚಾಯಿನ್ ಮೆನನ್(67) ಹಾಗೂ ಲಕ್ಷ್ಮಿ ಅಮ್ಮಲ್(66) ಪ್ರೀತಿಸಿ ಮದುವೆಯಾದ ವೃದ್ಧ ದಂಪತಿ. ಪತಿಯ ಮರಣದ ಬಳಿಕ ಕಳೆದ 2ವರ್ಷಗಳಿಂದ ಲಕ್ಷ್ಮಿ ಅಮ್ಮಲ್ ವೃದ್ಧಾಶ್ರಮದಲ್ಲೇ ಆಶ್ರಯ ಪಡೆದಿದ್ದು, ಕೊಚಾಯಿನ್ ಅವರು ಕಳೆದ 2ತಿಂಗಳ ಹಿಂದೆ ವೃದ್ಧಾಶ್ರಮಕ್ಕೆ ಬಂದಿದ್ದಾರೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಆಗ ಇಬ್ಬರು ವಿವಾಹವಾಗಬೇಕು ಎಂದು ನಿರ್ಧರಿಸಿ ಆಶ್ರಮದ ಮಂಡಳಿಗೆ ತಿಳಿಸಿದ್ದಾರೆ. ಅದರಂತೆ ವೃದ್ಧಾಶ್ರಮದವರೆಲ್ಲಾ ಸೇರಿ ಈ ಜೋಡಿಗೆ ಅದ್ದೂರಿಯಾಗಿ ವಿವಾಹ ಮಾಡಿಸಿದ್ದು, ಈ ಮದುವೆಗೆ ಕೇರಳದ ಕೃಷಿ ಸಚಿವ ವಿ.ಎಸ್. ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಎಸ್. ಶಾನವಾಸ್ ಅವರು ಆಗಮಿಸಿ ವೃದ್ಧ ದಂಪತಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ದಂಪತಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.