ಕೊಟ್ಟಿಗೆಹಾರ : ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸ್ಥಿತಿ ಗಂಭೀರ…

2261
firstsuddi

ಮೂಡಿಗೆರೆ : ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಕೊಟ್ಟಿಗೆಹಾರದ ದರ್ಬಾರ್ ಹೋಟೆಲ್ ಸಮೀಪದ ತಿರುವಿನಲ್ಲಿ ನಡೆದಿದೆ. ತಾಲ್ಲೂಕಿನ ಬಂಕೇನಹಳ್ಳಿ ನಿವಾಸಿ ದಿನಾಕರ್ ಹಾಗೂ ನವೀನ್ ಗಾಯಗೊಂಡವರು ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಸಮಾಜ ಸೇವಕ ಆರಿಫ್ ಹಾಗೂ ಆದರ್ಶ್ ಬಾಳೂರು ಹಾಗೂ ದರ್ಬಾರ್ ಹೋಟೆಲ್ ಮಾಲೀಕ ರಫೀಕ್ ಅವರ ಸಹಾಯದಿಂದ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.