ಚಿಕ್ಕಮಗಳೂರು : ದೇವರ ಬಳಿ ಕೂತ ಕೋತಿ ನೋಡಿ ಭಾವ ಪರವಶರಾದ ಪೊಲೀಸರು…

271

ಚಿಕ್ಕಮಗಳೂರು : ಪೊಲೀಸ್ ಠಾಣೆಗೆ ಕೋತಿಯೊಂದು ಬಂದು ಸೆಲ್, ಕುರ್ಚಿ, ಟೇಬಲ್ ಮೇಲೆಲ್ಲಾ ಕುಳಿತು ಠಾಣೆ ತುಂಬಾ ರಾಜರೋಷವಾಗಿ ಓಡಾಡಿರುವ ಘಟನೆ ಜಿಲ್ಲೆಯ ತರೀಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆಯಲ್ಲಿ ದೇವರ ಫೋಟೋಗಳನ್ನು ಇಟ್ಟಿದ್ದ ಸ್ಟಾಂಡ್ ಮೇಲೆ ಠಿಕಾಣಿ ಹೂಡಿದ್ದು, ದೇವರ ಬಳಿ ಕುಳಿತ ಕಪಿರಾಯನನ್ನು ನೋಡಿ ಭಾವ ಪರವಶರಾದ ಪೊಲೀಸರು ಕೋತಿಯನ್ನು ಓಡಿಸಲು ಹರಸಾಹಸ ಪಟ್ಟಿದ್ದಾರೆ.