ಅಭಿಮಾನಿ ತಂದ 5 ಸಾವಿರ ಕೆ.ಜಿ ಕೇಕ್‍ ಕತ್ತರಿಸಿ ಹುಟುಹಬ್ಬ ಆಚರಿಸಿದ ರಾಕಿಂಗ್ ಸ್ಟಾರ್ ಯಶ್…

266

ಬೆಂಗಳೂರು : ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಇಂದು 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಿನ್ನೆ ತಡರಾತ್ರಿ ಅಭಿಮಾನಿ ತಂದ 5000 ಕೆ.ಜಿ ಕೇಕ್‍ನ್ನು ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅವರು, ಕೆಜಿಎಫ್ 2 ಚಿತ್ರದ ಒಂದು ಸಣ್ಣ ಡೈಲಾಗ್ ನಿಮಗೋಸ್ಕರ ಹೇಳುತ್ತೇನೆ. ಸಿನಿಮಾದಲ್ಲಿ ನೋಡಿದರೆ ಮಜಾ ಬಂದಿರೋದು. ಆದರೆ ನಿಮಗಾಗಿ ಸಣ್ಣದಾಗಿ ಹೇಳುತ್ತೇನೆ ಎಂದು ಸಿನಿಮಾ ಡೈಲಾಗ್ ಹೇಳಿದ್ದು, “ಏನಂದೆ ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್, ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು-ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವಲ್ರ್ಡ್ ಈಸ್ ಮೈ ಟೆರಿಟರಿ” ಎಂಬ ಡೈಲಾಗ್ ಹೇಳಿದ್ದಾರೆ.