ಮದ್ಯದ ಅಮಲು, ರೂಂ ಮಾಡು ಎಂದಿದ್ದಕ್ಕೆ ರೇಪ್ ಮಾಡ್ದ… 

1405
firstsuddi
ಬೆಂಗಳೂರು : ನಾನು ಪೂರ್ತಿ ಕುಡಿದಿದ್ದೇನೆ, ಪಿಜಿಗೆ ಹೋಗಲು ಸಾಧ್ಯವಿಲ್ಲ, ನಾಚಿಕೆಯಾಗುತ್ತೆ ಹೋಟೆಲ್‍ನಲ್ಲಿ ರೂಂ ಬುಕ್ ಮಾಡು ಬೆಳಗ್ಗೆ ಹೋಗ್ತೀನೆಂದ ಯುವತಿಗೆ ಹೋಟೆಲ್‍ಗೆ ಕರೆದೊಯ್ದು ಅತ್ಯಾಚಾರಗೈದಿರೋ ಖಾಸಗಿ ಕಂಪನಿ ಉದ್ಯೋಗಿಯನ್ನು ಕೋರಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 
24 ವರ್ಷದ ಯುವತಿ ದೂರು ನೀಡಿದ ಹಿನ್ನೆಲೆ ಕೋರಮಂಗಲ ಪೊಲೀಸರು ಜೆಮ್‍ಷೆಡ್‍ಪುರ ಮೂಲದ ವಿನೋದ್ ರಾಜ್ ಎಂಬುವನನ್ನು ಬಂಧಿಸಿದ್ದಾರೆ. ಸಂತ್ರಸ್ಥೆ ಯುವತಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಪಿಜಿಯಲ್ಲಿ ವಾಸವಿದ್ದಾಳೆ. ಯುವತಿ ಹಾಗೂ ವಿನೋದ್ ರಾಜ್‍ಗೆ ಎರಡು ತಿಂಗಳ ಹಿಂದೆ ಸ್ನೇಹವಾಗಿತ್ತು. ಜನವರಿ 3ನೇ ತಾರೀಖು ಯುವತಿಗೆ ಫೋನ್ ಮಾಡಿ ಕರೆಸಿಕೊಂಡಿದ್ದ ವಿನೋದ್, ಕೋರಮಂಗಲದ ರೆಸ್ಟೋರೆಂಟ್‍ನಲ್ಲಿ ಆಕೆಗೆ ಮದ್ಯ ಕುಡಿಸಿದ್ದಾನೆ. ಕುಡಿತ ಹೆಚ್ಚಾಗಿದ್ದರಿಂದ ಯುವತಿ ಈಗ ಪಿಜೆಗೆ ಹೋಗಲು ಸಾಧ್ಯವಿಲ್ಲ ಮುಜುಗರವಾಗುತ್ತೆ ರೂಂ ಬುಕ್ ಮಾಡು ನಾಳೆ ಬೆಳಗ್ಗೆ ಪಿಜೆಗೆ ಹೋಗ್ತೀನಿ ಎಂದಿದ್ದಾಳೆ. ಎಂ.ಎಂ. ಗಾರ್ಡನ್‍ನಲ್ಲಿನ ಹೋಟೆಲ್‍ವೊಂದರಲ್ಲಿ ರೂಂ ಬುಕ್ ಮಾಡಿದ ವಿನೋದ್ ಆಕೆಯನ್ನು ಹೊಟೇಲ್‍ಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆದರೆ, ಘಟನೆಯ ವಿಷಯ ತಿಳಿದ ಸಂತ್ರಸ್ಥೆ ಸ್ನೇಹಿತರ ಸಲಹೆಯಂತೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.