ಚಿಕ್ಕಮಗಳೂರು : ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗುತ್ತಿದ್ದಂತೆ ಧರೆಗುರುಳಿದ ಬನ್ನಿ ಮರ…

768
firstsuddi

ಚಿಕ್ಕಮಗಳೂರು : ಕೃಷ್ಣನ ಪರಮಭಕ್ತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗುತ್ತಿದ್ದಂತೆ ಸುಮಾರು 300 ವರ್ಷಗಳ ಇತಿಹಾಸವಿರುವ ಬನ್ನಿ ಮರವು ತಾನಾಗೆ ಧರೆಗುರುಳಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆದಿದೆ. ಸುಮಾರು 300 ವರ್ಷಗಳ ಇತಿಹಾಸವಿರುವ ಈ ಮರವನ್ನು ಸ್ಥಳೀಯರು ದೈವದ ಮರ ಎಂದೇ ಕರೆಯುತ್ತಿದ್ದರು. ಗ್ರಾಮದ ಯಗಟಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲಿದ್ದ ಈ ಮರಕ್ಕೆ ದಿನಂಪ್ರತಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಸ್ಥಳಿಯರು ಪೂಜೆ ಮಾಡುತ್ತಿದ್ದರು. ಅಷ್ಟೆ ಅಲ್ಲದೇ ಪ್ರತಿ ವರ್ಷ ನವರಾತ್ರಿಯ ವಿಜಯದಶಮಿ ದಿವಸ ಇದೇ ಮರದ ಬಳಿ ಅಂಬನ್ನು ಹೊಡೆಯುತ್ತಿದ್ದರು. ಆದರೆ ಈ ಘಟನೆ ದೈವದ ಶಕ್ತಿಯೋ ಅಥವಾ ಕಾಕತಾಳಿಯವೋ ಅನ್ನೋದು ಸ್ಥಳೀಯರಿಗೆ ಗೊಂದಲ ತರಿಸಿದೆ. ಈ ಮರಕ್ಕೆ ಸ್ಥಳೀಯರು ದಿನಾ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೇ ಈ ಮರಕ್ಕೆ ದಾರಿಯಲ್ಲಿ ಹೋಗುವವರು-ಬರುವವರು ನಮಸ್ಕಾರ ಮಾಡುತ್ತಿದ್ದರು. ಆದರೆ, ಈ ಮರ ಪೇಜಾವರರ ಜೊತೆಯೇ ಚಿರನಿದ್ರೆಗೆ ಜಾರಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಇದು ದೈವದ ಪವಾಡ ಎಂದೇ ಭಾವಿಸಿದ್ದಾರೆ.