ಕೇರಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 19 ಅಂತಸ್ಥಿನ ಕಟ್ಟಡ ನೆಲಸಮ…

269
firstsuddi

ಕೇರಳ : ನಿಯಮವನ್ನು ಉಲ್ಲಂಘಿಸಿ ಕೆರೆದಂಡೆಯ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಸ್ಪೋಟಗಳನ್ನು ಬಳಸಿ ನೆಲಸಮ ಮಾಡಲಾಗಿದೆ. ಕರಾವಳಿ ನಿಯಂತ್ರಣ ವಲಯದ ಅನುಮತಿಯನ್ನು ಪಡೆಯದೆ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ 138 ದಿನಗಳ ಒಳಗೆ ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ಇಂದು 800 ಕೆಜಿ ಸ್ಪೋಟಕವನ್ನು ಬಳಸಿ 2 ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಇನ್ನುಳಿದ 2 ಕಟ್ಟಡಗಳನ್ನು ನಾಳೆ ನೆಲಸಮ ಮಾಡಲಾಗುತ್ತದೆ. ಈ ನಾಲ್ಕು ಕಟ್ಟಡಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 19 ಅಂತಸ್ಥಿನ H2O ಹೋಲಿಫೇತ್ ಕಟ್ಟಡ ಹಾಗೂ 73 ಫ್ಲ್ಯಾಟ್‍ಗಳನ್ನು ಹೊಂದಿದ್ದ ಆಲ್ಫಾ ಸಿರೀನ್ ಕಟ್ಟಡಗಳು ಧ್ವಂಸವಾಗಿದೆ. ಅಲ್ಲದೇ ಭದ್ರತೆಯ ದೃಷ್ಠಿಯಿಂದ ಭೂ, ವಾಯು ಹಾಗೂ ಜಲಭಾಗಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.