ಮೂಡಿಗೆರೆ : ಪೌರತ್ವ ಕಾಯ್ದೆ ವಿರೋದಿಸಿ ಬೃಹತ್ ಸಮಾವೇಶ ಹಿನ್ನಲೆ ಕೊಟ್ಟಿಗೆಹಾರದಲ್ಲಿ ಪೋಲಿಸರಿಂದ ವಾಹನ ತಪಾಸಣೆ…

272
firstsuddi

ಮೂಡಿಗೆರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯುತ್ತಿರುವ ಹಿನ್ನಲೆಯಲ್ಲಿ ಕೊಟ್ಟಿಗೆಹಾರದಲ್ಲಿ ಪೋಲಿಸರು ವಾಹನ ತಪಾಸಣೆ ನಡೆಸಿದರು.
ಕರಾವಳಿ ಭಾಗದಿಂದ ಚಾರ್ಮಾಡಿ ಮಾರ್ಗವಾಗಿ ಬರುವ ಮತ್ತು ಹೋಗುವ ವಾಹನಗಳನ್ನು ತಪಾಸಣೆ ನಡೆಸಿದ ಪೋಲಿಸರು ವಾಹನ ಸಂಖ್ಯೆ ಹಾಗೂ ವಾಹನ ಸವಾರರ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ದಾಖಲಿಸಿಕೊಂಡರು. ಕೊಟ್ಟಿಗೆಹಾರದ ಚೆಕ್‍ಪೋಸ್ಟ್ ನಲ್ಲಿ ಪೋಲಿಸರು ರಸ್ತೆಗೆ ಬ್ಯಾರಿಗೇಡ್ ಇಟ್ಟು ಒಂದೊಂದೆ ವಾಹನಗಳನ್ನು ತೀವ್ರ ತಪಾಸಣೆ ನಡೆಸಿದರು.
ಚಾರ್ಮಾಡಿ ಚೆಕ್ ಪೋಸ್ಟ್ ಸೇರಿದಂತೆ ಮಂಗಳೂರಿನಾದ್ಯಂತ 12 ಚೆಕ್ ಪೋಸ್ಟ್ ನಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.