ಸೇನಾ ತರಭೇತಿಯಲ್ಲಿದ್ದ ಕೊಡಗಿನ ಯೋಧ ಆತ್ಮಹತ್ಯೆಗೆ ಶರಣು…

201
firstsuddi

ಮಡಿಕೇರಿ : ಸೇನಾ ತರಭೇತಿಯಲ್ಲಿದ್ದ ಕೊಡಗಿನ ಯೊಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ಸೇನಾ ವಸತಿ ಗೃಹದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದ ರಚನ್ ಬೋಪಣ್ಣ(22) ಆತ್ಮಹತ್ಯೆ ಮಾಡಿಕೊಂಡ ಯೋಧ ಎಂದು ಗುರುತಿಸಲಾಗಿದ್ದು, 2019ರ ಏಪ್ರಿಲ್‍ನಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಬೋಪಣ್ಣ ಅವರು ಪುಣೆಯ ಸೇನಾ ತರಬೇತಿ ಶಿಬಿರದಲ್ಲಿ ಇದ್ದರು. ಪುಣೆಯ ವಸತಿ ಗೃಹದಲ್ಲಿ ರಚನ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಆ ಪತ್ರದಲ್ಲಿ ನಾನು ನನ್ನ ಸ್ವಿಚ್ಚೇಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾರಿಗೂ ಶಿಕ್ಷಿಸಬೇಕಾಗಿಲ್ಲ ಎಂದು ಬರೆದಿದ್ದಾರೆ.