ಚೀನಾದಲ್ಲಿ ಕೊರೊನಾ ವೈರಸ್‍ಗೆ 170 ಮಂದಿ ಬಲಿ…

162
firstsuddi

ಬೀಜಿಂಗ್ : ಚೀನಾದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾರಣಾಂತಿಕ ಕೊರೋನ್ ವೈರಸ್‍ಗೆ ಮೃತಪಟ್ಟವರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಅಲ್ಲದೇ ಈವರೆಗೆ 7700 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಇತ್ತ ಭಾರತದಲ್ಲೂ 670 ಮಂದಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಕೇರಳದಲ್ಲಿ 633, ಪಂಜಾಬ್‍ನಲ್ಲಿ 16, ಮಹಾರಾಷ್ಟ್ರ 6, ಕರ್ನಾಟಕ 4, ಬಿಹಾರ್ 1 ಹಾಗೂ ರಾಜಸ್ಥಾನದಲ್ಲಿ 1 ಕೊರೊನಾ ವೈರಸ್ ಸೋಂಖು ತಗುಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.