ಹೆತ್ತ ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಪರಾರಿಯಾದ ಮಗಳು…

728
firstsuddi

ಬೆಂಗಳೂರು : ಟೆಕ್ಕಿ ತನ್ನ ಹೆತ್ತ ತಾಯಿಯನ್ನೇ ಕೊಂದು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಕೆ.ಆರ್. ಪುರಂನ ಅಕ್ಷಯ್ ನಗರದಲ್ಲಿ ನಡೆದಿದೆ. ಫೆಬ್ರವರಿ 1 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರ್ಮಲಾ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಅಮೃತಾ ತಾಯಿಯನ್ನೇ ಕೊಂದ ಮಗಳು. ಸಿಂಪೋನಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಅಮೃತಾ ಅವರು ಮಲಗಿದ್ದ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಈ ವೇಳೆ ಯಾಕೆ ಈ ರೀತಿ ಮಾಡುತ್ತಿದ್ದೀಯ ಎಂದು ಅಮೃತಾ ಅವರ ಸಹೋದರ ಹರೀಶ್ ಅವರು ಕೇಳಿದಾಗ ನಾನು 15 ಲಕ್ಷ ಸಾಲವನ್ನು ಮಾಡಿದ್ದೇನೆ. ನಾನು ಹೈದರಾಬಾದ್‍ಗೆ ತೆರಳುತ್ತೇನೆ. ಬಳಿಕ ಸಾಲಗಾರರು ಮನೆ ಬಳಿ ಬಂದಾಗ ನನ್ನ ಬಂಡವಾಳ ನಿಮಗೆಲ್ಲಾ ತಿಳಿಯುತ್ತದೆ. ಹೀಗಾಗಿ ಕೊಲೆ ಮಾಡುತ್ತಿದ್ದೇನೆ. ನಿನ್ನನ್ನೂ ಕೂಡಾ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಮೃತಾ ತನ್ನ ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಯಿ ಹಾಗೂ ತಮ್ಮ ಹರೀಶ್ ಅಮೃತಾ ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕೊಲೆಗೆ ಪ್ರಿಯಕರನೂ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕೆ.ಆರ್. ಪುರಂ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.