ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ವೈದ್ಯ ಕೊರೊನಾ ವೈರಸ್ ಗೆ ಬಲಿ…

322
firstsuddi

ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಹಬ್ಬತ್ತಿದೆ ಎಂದು ವೈದ್ಯಕೀಯ ವಲಯಕ್ಕೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದ ವೈದ್ಯರೇ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಲೀ ವೆನ್‍ಲಿಯಾಂಗ್ ಕೊರೊನಾ ವೈರಸ್‍ಗೆ ಬಲಿಯಾದ ವೈದ್ಯ. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಲೀ ವೆನ್‍ಲಿಯಾಂಗ್ ಅವರು ಕಳೆದ ಡಿಸೆಂಬರ್​ 30ರಂದು ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಅವರು ನೀಡಿದ್ದ ಮಾಹಿತಿ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಹಿತಿ ವೈರಲ್ ಆಗಿರುವ ವಿಚಾರ ತಿಳಿದ ವುಹಾನ್ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸಲು ಈ ರೀತಿಯ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ್ದು, ಈವರೆಗೆ 640ಕ್ಕೂ ಹೆಚ್ಚು ಮಂದಿ ವೈರಸ್‍ಗೆ ಬಲಿಯಾಗಿದ್ದಾರೆ.