ಮದುವೆ ಆಗಲು ಹುಡುಗಿ ಸಿಗುತ್ತಿಲ್ಲ ಎಂದು ಮನನೊಂದು ಟೆಕ್ಕಿ ಆತ್ಮಹತ್ಯೆಗೆ ಶರಣು…

410
firstsuddi

ಹೈದರಾಬಾದ್ : ತನಗೆ ಎಷ್ಟು ಹುಡುಗಿ ಹುಡುಕಿದರೂ ಹುಡುಗಿ ಸಿಗುತ್ತಿಲ್ಲ ಎಂದು ಮನನೊಂದು ಟೆಕ್ಕಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂದ್ರಪ್ರದೇಶದ ರಾಮಂತಪುರದಲ್ಲಿ ನಡೆದಿದೆ. ರಾಮಂತಪುರದ ಶಾರದಾನಗರದ ನಿವಾಸಿ ಪಿ. ನಿಖಿಲ್ ಗೌಡ(24) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಎಂದು ಗುರುತಿಸಲಾಗಿದ್ದು, ಏರೆನಾ ಟವರ್ಸ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಖಿಲ್ ಅವರಿಗೆ ಕುಟುಂಬಸ್ಥರು ಮದುವೆ ಮಾಡಲೆಂದು ಹುಡುಗಿಯನ್ನು ಹುಡುಕುತ್ತಿದ್ದರೂ. ಆದರೆ ಕಾರಣಾಂತರಗಳಿಂದ ಎಷ್ಟು ಹುಡುಕಿದರೂ ಹುಡುಗಿ ಸಿಗುತ್ತಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ನಿಖಿಲ್ ಅವರು ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯವರು ಮನೆಗೆ ವಾಪಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬಸ್ಥರು ಕೂಡಲೇ ನಿಖಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರೊಳಗೆ ನಿಖಿಲ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಈ ಕುರಿತು ಉಪ್ಪಾಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.