ಹೈದರಾಬಾದ್ : ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಮನೆಯನ್ನು ಕಂಚಿ ಮಠದ ಸ್ವಾಮೀಜಿ ಅವರಿಗೆ ದಾನ ಮಾಡಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಈ ಹಿಂದೆ ಆಂಧ್ರಪ್ರದೇಶದ ನೆಲ್ಲೂರ್‍ನಲ್ಲಿ ಇರುವ ತಮ್ಮ ಮನೆಯನ್ನು ದಾನ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಅವರು ತಮ್ಮ ಮನೆಯನ್ನು ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ದಾನ ಮಾಡಿದ್ದು, ಆ ಮನೆಯಲ್ಲಿ ವೇದ ಮತ್ತು ಸಂಸ್ಕೃತ ಪಾಠ ಶಾಲೆಯನ್ನು ಆರಂಭಿಸಬೇಕು ಎಂಬುವುದು ಎಸ್‍ಪಿಬಿ ಅವರ ಆಸೆಯಾಗಿದ್ದು, ಹೀಗಾಗಿ ಒಂದು ಒಳ್ಳೆಯ ಉದ್ದೇಶಕ್ಕಾಗಿ ತಮ್ಮ ಮನೆಯನ್ನು ದಾನ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿದ ಅಭಿಮಾನಿಗಳು ಎಸ್‍ಪಿಬಿ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










