ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ-3” ಚಿತ್ರದ ಟೀಸರ್ ಬಿಡುಗಡೆ…

208

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾರಂಭವನ್ನು ಕಂಡಿದೆ. “ಕೋಟಿಗೊಬ್ಬ-3” ಚಿತ್ರ ಶಿವ ಕಾರ್ತಿಕ್ ನಿರ್ದೇಶನ ಹಾಗೂ ಸೂರಪ್ಪ ಬಾಬು ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಈಗ ಬಿಡುಗಡೆಯಾಗಿರುವ ಟೀಸರ್‍ನಲ್ಲಿ ರವಿಶಂಕರ್ ಅವರು ಕಿಚ್ಚ ಸುದೀಪ್ ಅವರು ಪಾತ್ರವನ್ನು ವಿಶ್ಲೇಷಣೆ ಮಾಡುತ್ತಾ ಹೋಗುತ್ತಾರೆ. ಅಲ್ಲದೇ ಕಿಚ್ಚ ಸುದೀಪ್ ಅವರು ಮಾಸ್ ಲುಕ್ ನೋಡುಗರನ್ನು ಸೆಳೆಯುತ್ತಿದ್ದು, ಕಿಚ್ಚ ಸುದೀಪ್ ಅವರಿಗೆ ಮಾಡೋನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಅವರು ನಾಯಕಿಯರಾಗಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಅಫ್ತಾಬ್ ಶಿವದಾಸನಿ ಅವರನ್ನು ಈ ಟೀಸರ್‍ನಲ್ಲಿ ಪರಿಚಯಿಸಲಾಗಿದೆ.