ನವದೆಹಲಿ : 2012ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿದ್ದು, ತಿಹಾರ್ ಜೈಲಾಧಿಕಾರಿಗಳು ಆರೋಪಿಗಳಿಗೆ ಕೊನೆಯದಾಗಿ ತಮ್ಮ ಕುಟುಂಬಸ್ಥರನ್ನು ಯಾವಾಗ ಭೇಟಿಯಾಗುತ್ತೀರಾ ಎಂದು ಕೇಳಿದ್ದಾರೆ. ಪ್ರಕರಣದ ನಾಲ್ವರು ಆರೋಪಿಗಳಾದ ಪವನ್, ಮುಖೇಶ್, ವಿನಯ್ ಹಾಗೂ ಅಕ್ಷಯ್ಗೆ ಈ ಹಿಂದೆ ಫೆ.1ಕ್ಕೆ ಮರಣದಂಡನೆ ನಿಗಧಿಯಾಗಿತ್ತು. ಬಳಿಕ ದೆಹಲಿಯ ಹೈಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಬಳಿಕ ಮಾರ್ಚ್ 3ರಂದು ಬೆಳಿಗ್ಗೆ ಗಲ್ಲಿಗೇರಿಸುವಂತೆ ಹೊಸ ಡೆತ್ ವಾರೆಂಟ್ ಜಾರಿ ಮಾಡಿದ್ದು, ಆರೋಪಿಗಳು ಗಲ್ಲುಶಿಕ್ಷೆಯಿಂದ ಪಾರಾಗುವಂತಹ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಗಲ್ಲಿಗೇರಿಸಲಿದ್ದಾರೆ. ಹೀಗಾಗಿ ತಿಹಾರ್ ಜೈಲಾಧಿಕಾರಿಗಳು ಆರೋಪಿಗಳಿಗೆ ತಮ್ಮ ಪೋಷಕರನ್ನು ಭೇಟಿಯಾಗುವ ಕುರಿತು ಪತ್ರದ ಮೂಲಕ ಕೇಳಿದ್ದು, ಈಗಾಗಲೇ ಮುಖೇಶ್ ಹಾಗೂ ಪವನ್ ತಮ್ಮ ಕುಟುಂಬಸ್ಥರನ್ನು ಬೇಟಿಯಾಗಿದ್ದು, ಈಗಾ ಅಕ್ಷಯ್ ಹಾಗೂ ವಿನಯ್ ಬಳಿ ಪೋಷಕರನ್ನು ಯಾವಾಗ ಭೇಟಿಯಾಗುತ್ತೀರ ಎಂದು ಜೈಲಾಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.










