ಪಂಜಾಬ್ : ಲಘು ವಿಮಾನವೊಂದು ಪತನಗೊಂಡು ಪೈಲಟ್ ಮೃತಪಟ್ಟಿರುವ ಘಟನೆ ಪಂಜಾಬ್ನ ಪಟಿಯಾಲ ಸೇನಾ ದಂಡು ಪ್ರದೇಶದಲ್ಲಿ ನಡೆದಿದೆ. ಎನ್ಸಿಸಿ ಕೆಡೆಟ್ಗಳಿಗೆ ತರಬೇತಿ ನೀಡಲು ಬಳಸುತ್ತಿದ್ದ ವಿಮಾನ ಇದಾಗಿದ್ದು, ಎನ್ಸಿಸಿ ಕೆಡೆಟ್ಗಳಿಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಐಎಎಫ್ ಪೈಲಟ್ ಮೃತಪಟ್ಟಿದ್ದು, ಇಬ್ಬರು ಎನ್ಸಿಸಿ ಕೆಡೆಟ್ಗಳು ಗಾಯಗೊಂಡಿದ್ದು, ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.










