ನಾಳೆ ಬಿಗ್‍ಬಾಸ್ ಜೋಡಿ ಚಂದನ್-ನಿವೇದಿತಾ ವಿವಾಹ…

396
firstsuddi

ಮೈಸೂರು : ಬಿಗ್‍ಬಾಸ್ ವಿನ್ನರ್ ಹಾಗೂ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಮೈಸೂರಿನ ಗೊಂಬೆ ನಿವೇದಿತಾ ಗೌಡ ಅವರು ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಇಂದು ಸಂಜೆ ಆರತಕ್ಷತೆ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ಚಂದನವನದ ಕಲಾವಿದರು, ಗಾಯಕರು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ತಮ್ಮ ಗೆಳತಿ ನಿವೇದಿತಾ ಗೌಡ ಅವರ ಕೈಗೆ ರಿಂಗ್ ತೊಡಿಸುವ ಮೂಲಕ ತಮ್ಮ ಪ್ರೇಮ ನಿವೇದನೆಯನ್ನು ತಿಳಿಸಿದ್ದರು. ಬಳಿಕ ಅ. 21ರಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.