2019-20 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ…

243
firstsuddi

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2019-20 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ನಗರ ಜಾನಪದ ಗಾಯಕಿ ಶ್ರೀಮತಿ ಗೌರಮ್ಮ, ಬೆಂಗಳೂರು ಗ್ರಾಮಾಂತರ ಶ್ರೀಮತಿ ಲಕ್ಷ್ಮಮ್ಮ, ಭಜನೆ ಪದಗಳು, ರಾಮನಗರ ಪೂಜಾ ಕುಣಿತದಲ್ಲಿ ಶ್ರೀ ಅಂಕನಹಳ್ಳಿ ಶಿವಣ್ಣ, ಕೋಲಾರ ತತ್ವಪದ ಪರಿಣಿತ ಶ್ರೀ ಅಂಗಡಿ ವೆಂಕಟೇಶಪ್ಪ, ತುಮಕೂರಿನ ಶ್ರೀ ರಂಗಯ್ಯ ಜಾನಪದ ಗೀತೆ, ದಾವಣಗೆರೆಯ ಶ್ರೀ ಪಿ ಜಿ ಪರಮೇಶ್ವರಪ್ಪ ವೀರಗಾಸೆ, ಚಿತ್ರದುರ್ಗದ ಶ್ರೀ ತಿಪ್ಪಣ್ಣ ಗೊರವರ ಕುಣಿತ, ಚಿಕ್ಕಬಳ್ಳಾಪುರ ಶ್ರೀ ಮುನಿರೆಡ್ಡಿ ಜಾನಪದ ಗಾಯನ , ಶಿವಮೊಗ್ಗ ಶ್ರೀ ಜಿಸಿ ಮಂಜಪ್ಪ ಡೊಳ್ಳುಕುಣಿತ, ಮೈಸೂರು ಶ್ರೀ ಮಾದಶೆಟ್ಟಿ ಕಂಸಾಳೆ ಕುಣಿತ , ಮಂಡ್ಯ ಶ್ರೀ ಸ್ವಾಮಿಗೌಡ ಬೀಸುವ ಪದಗಳು , ಚಾಮರಾಜನಗರ ಶ್ರೀಮತಿ ಗೌರಮ್ಮ ಸೋಬಾನೆ ಪದ, ಕೊಡಗು ಶ್ರೀ ಜಿಕೆ ರಾಮು ಕೊಡವರ ಕುಣಿತ , ಹಾಸನ ಶ್ರೀ ಕಪಿನಿ ಗೌಡ ಕೆ ಕೋಲಾಟ, ಚಿಕ್ಕಮಗಳೂರು ಡಾಕ್ಟರ್ ಹೆಚ್ ಸಿ ಈಶ್ವರ ನಾಯಕ ನಾಟಿವೈದ್ಯ, ಉಡುಪಿ ಶ್ರೀ ಸಾಧು ಪಾಣಾರ ಭೂತ ಕೋಲ, ದಕ್ಷಿಣ ಕನ್ನಡ ಶ್ರೀ ರುಕ್ಮಯ ಗೌಡ ಸಿದ್ದವೇಷ, ಬೆಳಗಾವಿ ಶ್ರೀಮತಿ ಸಂಕಮ್ಮ ಸಂಪ್ರದಾಯದ ಪದ, ಬಾಗಲಕೋಟೆ ಶ್ರೀಮತಿ ರುಕ್ಮಿಣಿ ಮಲ್ಲಪ್ಪ ಹರನಾಳ ಮದುವೆ ಹಾಡು, ಧಾರವಾಡ ಶ್ರೀ ಮಲ್ಲಯ್ಯ ರಾಚಯ್ಯ ತೋಟಗಂಟಿ ಜಾನಪದ ಸಂಗೀತ, ಹಾವೇರಿ ಶ್ರೀ ಹನುಮಂತಪ್ಪ ಧಾರವಾಡ ಭಜನೆ ಕೋಲಾಟ, ಗದಗ ಶ್ರೀ ನಾಗರಾಜ ನೀ ಜಕ್ಕಮ್ಮ ನವರ್ ಗೀಗಿ ಪದ, ವಿಜಯಪುರ ಶ್ರೀಮತಿ ನಿಮ್ಮವ್ವ ಕೆಂಚಪ್ಪ ಗುಬ್ಬಿ ಸೋಬಾನೆ ಪದ, ಉತ್ತರಕನ್ನಡ ಶ್ರೀಮತಿ ಹುಸೇನಬಿ ಬುಡನ್ ಸಾಬ್ ಸಿದ್ದಿ ಸಿದ್ದಿ ಡಮಾಮಿ ನೃತ್ಯ, ಕಲಬುರ್ಗಿ ಶ್ರೀ ಗಂಗಾಧರಯ್ಯ ಅಗ್ಗಿಮಠ ಪುರುವಂತಿಕೆ, ಬೀದರ್ ಶ್ರೀ ತುಳಸಿ ರಾಮ ಭೀಮರಾವ್ ಸುತಾರ್ ಆಲದ ಎಲೆಯಿಂದ ಸಂಗೀತ, ಕೊಪ್ಪಳ ಶ್ರೀಮತಿ ಶಾಂತವ್ವ ಲಕ್ಷ್ಮಪ್ಪ ಲಮಾಣಿ ಲಮಾಣಿ ನೃತ್ಯ, ರಾಯಚೂರು ಶ್ರೀ ಸೂಗಪ್ಪ ನಾಗಪ್ಪ ತತ್ವಪದ, ಬಳ್ಳಾರಿ ಶ್ರೀ ವೇಷಗಾರ ಮೋತಿ ರಾಮಣ್ಣ ಹಗಲುವೇಷ, ಯಾದಗಿರಿ ಶ್ರೀ ಶಿವಮೂರ್ತಿ ತನಿಖೆದಾರ ಗೀಗಿ ಪದ.

ರಾಮನಗರದ ಡಾ. ಚಕ್ಕೆರೆ ಶಿವಶಂಕರ್ ಡಾಕ್ಟರ್ ಜಿ ಶಂ ಪರಮಶಿವಯ್ಯ ಪ್ರಶಸ್ತಿ, ಕಲಬುರ್ಗಿಯ ಬಸವರಾಜ ಪೊಲೀಸ್ ಪಾಟೀಲ್ ಡಾಕ್ಟರ್ ಬಿ ಎಸ್ ಗದ್ದಗಿಮಠ ಪ್ರಶಸ್ತಿ ತಜ್ಞ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಾಲ್ತಾಡಿ ರಾಮಕೃಷ್ಣ ಆಚಾರ್ ಆಯ್ಕೆಯಾಗಿದ್ದಾರೆ.