ಕೊರೊನಾ ವೈರಸ್ ಭೀತಿ-ಹಲವು ದೇಶಗಳಿಗೆ ತೆರಳುವ ವೀಸಾ ರದ್ದುಗೊಳಿಸಿದ ಕೇಂದ್ರ ಸರ್ಕಾರ…

162
firstsuddi

ನವದೆಹಲಿ : ಕೊರೋನಾ ವೈರಸ್ ಭೀತಿ ಹಿನ್ನೆಲೆ, ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ತೆರಳುವ ವೀಸಾವನ್ನು ರದ್ದುಗೊಳಿಸಿದೆ. ಚೀನಾದಲ್ಲಿ ಈ ಮಹಾಮಾರಿ ಕೊರೊನಾ ವೈರಸ್‍ಗೆ 3000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇತ್ತ ಭಾರತದಲ್ಲೂ ಕೊರೊನಾ ವೈರಸ್ ಮೂವರಲ್ಲಿ ಪತ್ತೆಯಾಗಿರುವುದಾಗಿ ದೃಢಪಟ್ಟಿದೆ. ಈ ಹಿನ್ನೆಲೆ, ಕೊರೊನಾ ವೈರಸ್ ಪೀಡಿತ ದೇಶವಾದ ಚೀನಾ, ಇಟಲಿ, ದಕ್ಷಿಣ ಕೊರಿಯಾ, ಜರ್ಮನ್ ಹಾಗೂ ಜಪಾನ್ ಸೇರಿದಂತೆ ವಿವಿಧ ದೇಶಗಳಿಗೆ ತೆರಳುವ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.