ಕನ್ನಡ ಚಿತ್ರರಂಗಕ್ಕೂ ತಟ್ಟಿದ ಕೊರೊನಾ ಬಿಸಿ…

258
firstsuddi

ಬೆಂಗಳೂರು : ಇಡೀ ವಿಶ್ವದಾಧ್ಯಂತ ಭೀತಿ ಹೆಚ್ಚಿಸುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ಬಿಸಿ ಕನ್ನಡ ಚಿತ್ರರಂಗಕ್ಕೂ ತಟ್ಟಿದ್ದು, ನಟ ದರ್ಶನ್ ಅವರು ಅಭಿನಯಿಸುತ್ತಿರುವ ರಾಬರ್ಟ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಅವರು ಅಭಿನಯಸಿತ್ತಿರುವ ಯುವರತ್ನ ಚಿತ್ರತಂಡ ವಿದೇಶದಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನು ರದ್ದುಗೊಳಿಸಿದೆ. ಕಳೆದ ಕೆಲವು ದಿನಗಳ ಹಿಂದೆ ದರ್ಶನ್ ಅವರು ಅಭಿನಯಿಸುತ್ತಿರುವ ರಾಬರ್ಟ್ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿತು. ಆದರೆ ಈ ಮಾರಣಾಂತಿಕ ಕೊರೊನಾ ವೈರಸ್ ವಿಶ್ವದಾಧ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದೇಶದಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಪುನೀತ್ ರಾಜ್‍ಕುಮಾರ್ ಅವರು ಅಭಿನಯಿಸುತ್ತಿರುವ ಯುವರತ್ನ ಚಿತ್ರತಂಡ ಕೂಡಾ ವಿದೇಶದಲ್ಲಿ ನಡೆಯಬೇಕಿದ್ದ ಚಿತ್ರೀಕರಣವನ್ನು ರದ್ದುಪಡಿಸಿದೆ.