ನವದೆಹಲಿ : ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ 16 ವರ್ಷದ ಶೆಫಾಲಿ ವರ್ಮಾ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇದೀಗಾ ಐಸಿಸಿ ಟಿ-20 ಶ್ರೇಯಾಂಕದಲ್ಲಿ 19 ಸ್ಥಾನ ಜಿಗಿತ ಕಂಡು ನಂಬರ್ 1 ಪಟ್ಟಕ್ಕೇರಿದ್ದು, ಈ ಮೂಲಕ ನಾಯಕಿ ಮಿಥಾಲಿ ರಾಜ್ ಅವರ ಬಳಿಕ ಮೊದಲ ಸ್ಥಾನಕ್ಕೆ ಏರಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಐಸಿಸಿ ನೂತನ ಮಹಿಳಾ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶೆಫಾಲಿ ವರ್ಮಾ ಅವರು 19 ಸ್ಥಾನ ಏರಿಕೆಗೊಂಡು 761 ಅಂಕಗಳ ಮೂಲಕ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೇವಲ 18 ಟಿ-20 ಪಂದ್ಯಗಳನ್ನಾಡಿರುವ ಶೆಫಾಲಿ ವರ್ಮಾ ಅವರು 146.96 ಸ್ಟ್ರೈಕ್ ರೇಟ್‍ನಲ್ಲಿ 485 ರನ್ ಗಳಿಸಿದ್ದಾರೆ. 2018ರಿಂದ ಮೊದಲ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‍ನ ಸೂಜೀ ಬೇಟ್ಸ್ ಅವರು ಈಗಾ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.