ನವದೆಹಲಿ : ಚೀನಾದಿಂದ ಆರಂಭವಾದ ಮಹಾಮಾರಿ ಕೊರೊನಾ ವೈರಸ್ ಇದೀಗಾ ವಿಶ್ವದಾಧ್ಯಂತ ವ್ಯಾಪಿಸಿದ್ದು, ಕೊರೊನಾ ವೈರಸ್‍ನಿಂದ ಮೃತಪಟ್ಟವರ ಸಂಖ್ಯೆ 4000 ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಈ ವರೆಗೂ ವಿಶ್ವದಾಧ್ಯಂತ 1.14 ಲಕ್ಷ ಜನರಲ್ಲಿ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ. ಇತ್ತ ಭಾರತದಲ್ಲೂ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರೆಗೆ 47 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.










