ಚಿಕ್ಕಮಗಳೂರು :ಸಿಂಗಾಪುರದಿಂದ ಆಗಮಿಸಿದ್ದ  ಮಹಿಳೆ ವರದಿಯಲ್ಲಿ ಕರೋನಾ ಸೊಂಕಿಲ್ಲ, ನೆಗೆಟಿವ್ ಅಂಶ ಪತ್ತೆ…

597
firstsuddi

ಚಿಕ್ಕಮಗಳೂರು : ಇಬ್ಬರು ಶಂಕಿತ ಕರೋನಾ ರೋಗಿಗಳು ಆಸ್ಪತ್ರೆಗೆ ದಾಖಲಾಗಿದು ಇಬ್ಬರಲ್ಲೂ ನೆಗೆಟಿವ್ ಅಂಶ ಪತ್ತೆ…

ಚಿಕ್ಕಮಗಳೂರು.:ವಿಪರೀತ ಕೆಮ್ಮು-ಶೀಥ ಹಾಗೂ ಜ್ವರದಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಇಂದು ದಾಖಲಾಗಿದ್ದ ಮಹಿಳೆಗೂ ಕರೋನ ಸೋಂಕಿಲ್ಲ ಎಂಬುದು ಪರೀಕ್ಷೆಯಿಂದ ಸಾಬೀತಾಗಿದ್ದು,  ಸೋಂಕಿಲ್ಲ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಕೂಡ ಸ್ಪಷ್ಟಪಡಿಸಿದ್ದಾರೆ. 6ದಿನಗಳ ಹಿಂದೆ ಸಿಂಗಾಪುರದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದ 40 ವರ್ಷದ ಮಹಿಳೆಗೆ ತೀವ್ರ ಜ್ವರ, ಕೆಮ್ಮು, ಶೀತ ಹಿನ್ನೆಲೆ  ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯ ಹೆರಿಗೆ ಆಸ್ಪತ್ರೆಯ ಐಸೋಲೇಷನ್ ವಿಭಾಗದಲ್ಲಿ ಆ ಮಹಿಳೆಗೆ  ತೀವ್ರ ನಿಗಾ ಘಟಕದಲ್ಲಿಟ್ಟು, ಚಿಕಿತ್ಸೆ ನೀಡಲಾಗ್ತಿತ್ತು.  ರಕ್ತದ ಮಾದರಿಯನ್ನ ಪರೀಕ್ಷೆಗೆಂದು ಹಾಸನಕ್ಕೆ ಕಳಿಸಲಾಗಿತ್ತು. ಇಂದು ರಕ್ತದ ಮಾದರಿಯ ವರದಿ ಬಂದಿದ್ದು ಆ ಮಹಿಳೆಗೆ  ಕರೋನ ಸೋಂಕಿಲ್ಲ ಎಂಬುದು ಸಾಬೀತಾಗಿದೆ.ಈವರೆಗೂ ಇಬ್ಬರು ಶಂಕಿತ ಕರೋನಾ ರೋಗಿಗಳು ಆಸ್ಪತ್ರೆಗೆ ದಾಖಲಾಗಿದು ಇಬ್ಬರಲ್ಲೂ ನೆಗೆಟಿವ್ ಅಂಶ ಪತ್ತೆಯಾಗಿದು ಇದರಿಂದ ಮತ್ತೊಮ್ಮೆ ನಿಟ್ಟುಸಿರು ಬಿಟ್ಟ ಕಾಫಿನಾಡಿಗರು