ವಿದೇಶದಲ್ಲಿರುವ 276 ಭಾರತೀಯರಿಗೆ ಕೊರೊನಾ…!

162
firstsuddi

ನವದೆಹಲಿ : ಕೇಂದ್ರ ಸರ್ಕಾರ ವಿದೇಶದಲ್ಲಿರುವ ಭಾರತೀಯ ಕೊರೊನಾ ಸೋಂಕಿತರ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 276 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಅದರಲ್ಲಿ ಇರಾನ್‍ನಲ್ಲೇ 255 ಭಾರತೀಯರಿಗೆ ಸೋಂಕು ತಗುಲಿದ್ದು, ಯುಎಇನಲ್ಲಿ 12, ಇಟಲಿಯಲ್ಲಿ 5, ಶ್ರೀಲಂಕಾ, ರವಾಂಡಾ, ಹಾಂಕಾಂಗ್, ಕುವೈತ್‍ನಲ್ಲಿ ತಲಾ ಒಬ್ಬೊಬ್ಬರಲ್ಲಿ ಕೊರೊನಾ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ.