ಕೊರೊನಾ ಭೀತಿ: ಕರ್ನಾಟಕವೇ ಲಾಕ್‍ಡೌನ್ ಆಗಿದ್ದರೂ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಪೊಲೀಸರ ಲಾಠಿ ಏಟು…

200
firstsuddi

ಬೆಂಗಳೂರು : ಕೊರೊನಾ ವೈರಸ್ ಭಿತಿ ಹಿನ್ನೆಲೆ, ಇಡೀ ರಾಜ್ಯವೇ ಸಂಪೂರ್ಣ ಲಾಕ್‍ಡೌನ್ ಆಗಿದ್ದು, ಈ ನಡುವೆ ರಸ್ತೆಗೆ ಇಳಿಯಬೇಡಿ, ಮನೆಯಲ್ಲೇ ಇರಿ ಎಂದರೂ ಕೇಳದೆ ಅನಗತ್ಯವಾಗಿ ತಿರುಗಾಡುತ್ತಿರುವವರಿಗೆ ಪೊಲೀಸರು ಲಾಠಿ ರುಚಿಯನ್ನು ತೋರಿಸಿದ್ದಾರೆ. ಇಡೀ ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಜನರು ಗುಂಪಲ್ಲಿ ಸೇರಬಾರದು ಎಂದು ಆದೇಶ ನೀಡಿದ್ದರೂ ಇಂದು ಬೆಳಿಗ್ಗೆಯಿಂದಲೇ ಸಾರ್ವಜನಿಕರು ಹಬ್ಬದ ಖರೀದಿಗೆ ಮಾರ್ಕೆಟ್‍ಗೆ ಜಮಾಯಿಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಮಾರ್ಕೆಟ್‍ಗಳಿಂದ ಜನರನ್ನು ಚದುರಿಸಿದ್ದು, ಅನಗತ್ಯವಾಗಿ ತಿರುಗಾಡುತ್ತಿರುವ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಪೊಲೀಸರು ಲಾಠಿ ಏಟನ್ನು ನೀಡಿದ್ದಾರೆ.