ವಿಶ್ವದಾಧ್ಯಂತ ಕೊರೊನಾ ಭೀತಿ ಬೆನ್ನಲ್ಲೇ ಸಿಖ್ ಗುರುದ್ವಾರದ ಮೇಲೆ ಉಗ್ರರ ದಾಳಿ-27 ಮಂದಿ ಸಾವು…

735
firstsuddi

ಕಾಬೂಲ್ : ಇಡೀ ವಿಶ್ವದಾಧ್ಯಂತ ಮಹಾಮಾರಿ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಬೆನ್ನಲ್ಲೇ ಉಗ್ರರು ಸಿಖ್ ಗುರುಧ್ವಾರದ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಅಫ್ಘಾನಿಸ್ಥಾನದ ಕಾಬೂಲ್‍ನ ಶೋರ್ ಬಜಾರ್ ಪ್ರದೇಶದಲ್ಲಿ ಇರುವ ಸಿಖ್ ಗುರುಧ್ವಾರದ ಮೇಲೆ ಶಸ್ತ್ರಸಜ್ಜಿತ ಉಗ್ರರು ಇಂದು ಬೇಳಿಗ್ಗೆ 7:45ಕ್ಕೆ ದಾಳಿ ನಡೆಸಿದ್ದು, 27ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ಆಫ್ಘಾನ್ ಭದ್ರತಾ ಪಡೆಗಳು ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಅಲ್ಲದೇ ಸಿಖ್ ಗುರುಧ್ವಾರದ ಮೇಲೆ ಉಗ್ರರು ದಾಳಿ ನಡೆಸಿರುವುದನ್ನು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪುರಿ ಅವರು ಖಂಡಿಸಿದ್ದು, ದಾಳಿಯಲ್ಲಿ ಮೃತರಾದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಆಫ್ಘಾನಿಸ್ಥಾನದಲ್ಲಿರುವ ಹಿಂದೂ ಮತ್ತು ಸಿಖ್ ಸಮುದಾಯದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.