ತುಮಕೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‍ಗೆ 3ನೇ ಬಲಿಯಾಗಿದ್ದು, ತುಮಕೂರಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತುಮಕೂರಿನ ಶಿರಾ ಮೂಲದ 60 ವರ್ಷದ ವೃದ್ಧ ದೆಹಲಿಗೆ ತೆರಳಿ ಮಾರ್ಚ್ 14ರಂದು ತುಮಕೂರಿಗೆ ವಾಪಸ್ಸಾಗಿದ್ದು, ಅವರಿಗೆ ಮಾರ್ಚ್ 18ರಂದು ಕೊರೊನಾ ಸೋಂಕು ತಗುಲಿರುವುದಾಗಿ ದೃಢವಾಗಿತ್ತು. ಬಳಿಕ ಮಾರ್ಚ್ 24ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 10:45ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.










