ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿದ್ದು, ಈ ನಡುವೆ ಆಹಾರ ಸಾಮಾಗ್ರಿಗಳಿಲ್ಲದೆ ಸಂಕಷ್ಟದಲ್ಲಿದ್ದ ಕಡುಬಡವರ ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸಿ ಕಾಫಿನಾಡ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಗರದ ಮಾರ್ಕೆಟ್ ರೋಡ್, ಗುರುನಾಥ ಸರ್ಕಲ್ ನಿವಾಸಿಗಳಿಗೆ ದಾನಿಗಳು ಕೊಟ್ಟ ಆಹಾರ ಸಾಮಾಗ್ರಿಗಳನ್ನು ನಗರ ಪಿ.ಎಸ್.ಐ ತೇಜಸ್ವಿ ಹಾಗೂ ಸಿ.ಪಿ.ಐ ಸಲೀಂ ಅವರು ಮನೆ ಮನೆಗೆ ರೇಷನ್ ತಲುಪಿಸಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮಾಡಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಸ್ಥಳಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.









