ಮೂಡಿಗೆರೆ : ಪೊಲೀಸರೊಂದಿಗೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕರ್ತರು…

318
firstsuddi

ಕೊಟ್ಟಿಗೆಹಾರ: ಲಾಕ್‍ಡೌನ್ ಹಿನ್ನಲೆಯಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರೊಂದಿಗೆ ಮೂಡಿಗೆರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕೂಡ ಕೈ ಜೋಡಿಸಿದ್ದು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಕೊಟ್ಟಿಗೆಹಾರ, ಬಣಕಲ್, ಕೂವೆ, ನಿಡುವಾಳೆ, ಜಾವಳಿ ಗ್ರಾಮಗಳ ನ್ಯಾಯಬೆಲೆ ಅಂಗಡಿ, ದಿನಸಿ ಮುಂತಾದ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಪೊಲೀಸರು ಜನರು ಅನಗತ್ಯವಾಗಿ ಹೊರಗೆ ಬರದಂತೆ ಮತ್ತು ವಾಹನಗಳಲ್ಲಿ ಅನಗತ್ಯವಾಗಿ ತಿರುಗದಂತೆ ಸೂಚಿಸಿದರೂ ಜನರು ಹೊರಗೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. ಕರೊನಾ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯನ್ನು ಜನರಿಗೆ ಮನದಟ್ಟು ಮಾಡಲು ಹತ್ತಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್‍ನ ಪದಾಧಿಕಾರಿಗಳು ಪೊಲೀಸರ ಜೊತೆಗೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಪದಾಧಿಕಾರಿಗಳಾದ ಜಯಪಾಲ್, ಚೇತನ್, ಪರಮೆಶ್, ಇಮ್ರಾನ್, ಸ್ವಾಮಿ, ಸಂಪತ್, ಹೇಮಂತ್, ರಜತ್ ಮುಂತಾದವರು ಇದ್ದರು.