ಭಾರತೀಯ ನೌಕಾಪಡೆಯ 21 ಸಿಬ್ಬಂಧಿಗೆ ಕೊರೊನಾ ಸೋಂಕು ದೃಢ…

139
firstsuddi

ನವದೆಹಲಿ : ದೇಶಾದ್ಯಂತ ಭೀತಿ ಹೆಚ್ಚಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್ ಈಗಾ ಭಾರತೀಯ ನೌಕಾಪಡೆಯ ಮೇಲೂ ದಾಳಿ ನಡೆಸಿದ್ದು, ಮುಂಬೈನಲ್ಲಿ ಇರುವ ನೌಕಾಪಡೆಯ 21 ಸಿಬ್ಬಂಧಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ. ಸೋಂಕಿತರಲ್ಲೆರನ್ನು ಐಎನ್‍ಎಸ್ ಅಶ್ವಿನಿ ನೌಕಾಪಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಏಪ್ರಿಲ್ 7ರಂದು ನೌಕಾಪಡೆಯ ಸೇಲರ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇವರಿಂದ ಉಳಿದ 20 ಮಂದಿ ಸಿಬ್ಬಂಧಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ನೌಕಾಪಡೆಯ ಸಿಬ್ಬಂಧಿಗಳಲ್ಲೆರನ್ನು ಕ್ವಾರಂಟೈನ್ ಮಾಡಲಾಗಿದೆ.