ಹುಟ್ಟುಹಬ್ಬಕ್ಕಾಗಿ ಕೂಡಿಟ್ಟಿದ್ದ 11,111 ರೂ ಹಣವನ್ನು ಪ್ರಧಾನಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಬಾಲಕಿ…

196
firstsuddi

ಕೋಲಾರ : 2ನೇ ತರಗತಿ ಬಾಲಕಿಯೋರ್ವಳು ತನ್ನ ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನ ಮಂತ್ರಿ ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾಳೆ. ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮೂಲದ ಚರಿತ ಆರ್. ರಾಯಲ್ ಎಂಬ ಬಾಲಕಿ ಕಳೆದ ಒಂದು ವರ್ಷದಿಂದ ತನ್ನ ಹುಟ್ಟುಹಬ್ಬಕ್ಕಾಗಿ ಹುಂಡಿಯಲ್ಲಿ ಕೂಡಿಟ್ಟಿದ್ದ 11,111 ರೂ ಹಣವನ್ನು ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ನೀಡಿದ್ದಾಳೆ. ಪ್ರತಿವರ್ಷ ತನ್ನ ಹುಟ್ಟುಹಬ್ಬಕ್ಕೆಂದು ಕೂಡಿಡುತ್ತಿದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡುತ್ತಿದ್ದ ಬಾಲಕಿ ಈ ವರ್ಷ ದೇಶದಲ್ಲಿ ಕೊರೊನಾ ವೈರಸ್ ಚಿಕಿತ್ಸೆಗಾಗಿ ಪ್ರಧಾನ ಮಂತ್ರಿ ಕೊರೊನಾ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದು, ಅದರಂತೆ ಇಂದು ತನ್ನ ಪೋಷಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಹಣವನ್ನು ನೀಡಿದ್ದಾಳೆ. ಬಾಲಕಿಯ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.