ಜಿನಿವಾ : ಮಹಾಮಾರಿ ಕೊರೊನಾ ವೈರಸ್ ಇನ್ನೂ ದೀರ್ಘಕಾಲದವರೆಗೂ ಜಗತ್ತಿನೊಂದಿಗೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಅವರು, ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವದಾದ್ಯಂತ ವ್ಯಾಪಿಸಿ ಹೆಚ್ಚು ಸಾವು ನೋವುಗಳು ಸಂಭವಿಸುತ್ತಿದೆ. ಕೆಲವು ದೇಶಗಳು ನಮ್ಮಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅಲ್ಲಿಯೂ ಕೂಡಾ ಸೋಂಕುಗಳು ಪತ್ತೆಯಾಗುತ್ತಲೇ ಇದೆ. ಆಫ್ರಿಕಾ, ಅಮೆರಿಕಾದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಲವು ದೇಶಗಳಲ್ಲಿ ಈ ವೈರಸ್ ಆರಂಭಿಕ ಹಂತದಲ್ಲಿದೆ. ಮತ್ತೆ ಕೆಲವು ದೇಶಗಳಲ್ಲಿ ಬಹುಬೇಗ ವ್ಯಾಪಿಸುತ್ತಿದೆ. ಹೀಗಾಗಿ ಈ ಸೋಂಕಿನ ವಿಚಾರದಲ್ಲಿ ನಿರ್ಲಕ್ಷ ವಹಿಸಬೇಡಿ. ಏಕೆಂದರೆ ಇದು ಇನ್ನೂ ದೀರ್ಘಕಾಲ ನಮ್ಮೊಂದಿಗೆ ಅಂದರೆ ಈ ಜಗತ್ತಿನೊಂದಿಗೆ ಇರುತ್ತದೆ. ಹೀಗಾಗಿ ವಿಶ್ವದ ಎಲ್ಲಾ ದೇಶಗಳು ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.










