ಮೂಡಿಗೆರೆ : ರಂಜಾನ್ ಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಸುಂದರ್ ಅವರ ಚಿಕಿತ್ಸೆಗೆ ನೀಡಿ ಮಾನವೀಯತೆ ಮೆರೆದ ಬಾಲಕಿ…

790
firstsuddi

ಕೊಟ್ಟಿಗೆಹಾರ : ಅಂಗವೈಕಲ್ಯ ಮಗ, ಬುದ್ಧಿಮಾಂಧ್ಯೆ ಮಗಳು, ಪತಿ ಪಾಶ್ರ್ವವಾಯುವಿಗೆ ತುತ್ತಾಗಿದ್ದು, ಲಾಕ್‍ಡೌನ್ ಪ್ರಾರಂಭವಾದ ದಿನದಿಂದ ಸರಿಯಾಗಿ ಕೆಲಸವಿಲ್ಲದೆ ಹೊತ್ತಿನ ಊಟಕ್ಕೂ ತೊಂದರೆಯಾಗಿದ್ದ ಸುಂದರ್ ಅವರ ಕುಟುಂಬಕ್ಕೆ ರಂಜಾನ್ ಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ನೀಡುವ ಮೂಲಕ ಬಣಕಲ್‍ನ ಇಂದಿರಾನಗರದ ಬಾಲಕಿ ಆಶಿಕಾ ಮಾನವೀಯತೆ ಮೆರೆದಿದ್ದಾಳೆ. ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಬಾಲಕಿ ಆಶಿಕಾ, ಸುಂದರ್ ಅವರ ಕುಟುಂಬ ಸಂಕಷ್ಟದಲ್ಲಿರುವ ಸುದ್ದಿ ಓದಿ ಅವರ ಚಿಕಿತ್ಸೆಗೆ ಚಿಕ್ಕ ಸಹಾಯ ಮಾಡಲು ಹುಂಡಿಯಲ್ಲಿದ್ದ ಹಣವನ್ನು ನೀಡಿದ್ದೇನೆ. ಅವರು ತುಂಬಾ ಕಷ್ಟದಲ್ಲಿದ್ದಾರೆ. ಶ್ರೀಮಂತರು ಅವರಿಗೆ ನೆರವಾಗಬೇಕು ಎಂದು ತಿಳಿಸಿದ್ದಾಳೆ. ಆಶಿಕಾ, ಬಣಕಲ್‍ನ ಸಾಮಾಜಿಕ ಕಾಯಕರ್ತ ಆರೀಫ್ ಮತ್ತು ಆಯಿಷಾ ದಂಪತಿಗಳ ಪುತ್ರಿ.